ಮಲ್ಲಿಕಾ ಶೆರಾವತ್ ಬೆಂಗಳೂರಲ್ಲಿ ದರ್ಶಿನಿ ಹೋಟೆಲ್ ತೆರೆದರೆ, ಏನಿಡಬಹುದು ಹೆಸರು..? If Mallika Sherawat opens a darshini ‘hot’el in Bengaluru, what name she would keep..?

ಈ ಚುನಾವಣೆ ಹೊತ್ತಿಗೆ ‘ವೀರಪ್ಪನ್’ ಬದುಕಿದ್ದಿದ್ದರೆ….

 ಭೂಗಳ್ಳರಿಗಿಂತ ಕಾಡುಗಳ್ಳರೇ ಮೇಲು.

 
ಭೂಮಿಯನ್ನೇ ಕದಿಯುವವರಿಗಿಂತ ಭೂಮಿ ಮೇಲಿನ ಮರ ಕದಿಯುವರೇ ಉತ್ತಮ ಎಂದು ಪರಿಗಣಿಸಿರುವ ‘ಜನ ಅಹಿತ ಪಕ್ಷ’ , ಶ್ರೀಯುತ ವೀರಪ್ಪನ್‍ರವರಿಗೆ ಈ ಬಾರಿಯ ಟಿಕೆಟ್ ನೀಡಲು ನಿರ್ಧರಿಸಿದೆ. ವಿರೋಧಿ ಪಕ್ಷದವರು, ಅವರ ಪ್ರಖ್ಯಾತಿ ಸಹಿಸದವರು, ಮಾಧ್ಯಮಗಳು ಸನ್ಮಾನ್ಯ ವೀರಪ್ಪನ್‍ರವರ ವಿರುದ್ಧ ‘ಕುಖ್ಯಾತಿ’ ಎಂಬ ಅಪಪ್ರಚಾರ ನಿಲ್ಲಿಸದಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ‘ಜನ ಅಹಿತ ಪಕ್ಷ’ದ ವಕ್ತಾರರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ. ವೀರಪ್ಪನ್‍ರವರ ವಿರುದ್ಧದ ಕುಖ್ಯಾತಿ ಆರೋಪ, ಅಪಹರಣ ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದೂ ಸಹ ಅವರು ಸ್ಪಷ್ಟಪಡಿಸಿದ್ದಾರೆ.