ಹೊಸದೊಂದು ಅವತಾರದಲ್ಲಿ ಪಂಚ್ ಲೈನ್….

ಪಂಚ್ ಲೈನ್ ನ template ಬದಲಿಸದೇ ತುಂಬಾ ದಿನಗಳಾಗಿದ್ದವು. ಮೇಲಿನ ಚಿತ್ರವಿನ್ಯಾಸವನ್ನೂ ಬದಲಿಸಬೇಕಿದೆ. Examinations ನಲ್ಲಿ ಸ್ವಲ್ಪ busy ಇದ್ದಿದ್ದರಿಂದ ಸಾಧ್ಯವಾಗಿರಲಿಲ್ಲ. ಈಗ template ಅಷ್ಟೇ ಬದಲಿಸಿದ್ದೇನೆ.  ಇನ್ನೂ ಬದಲಾವಣೆ ಮಾಡುವುದಿದೆ. ಜನವರಿ 12 ಆದಮೇಲೆ ಸಾಧ್ಯವಾಗಬಹುದು.

ಇನ್ನೊಂದು strategy ಹೇಳ್ಬೇಕು ನಿಮ್ಗೆ..

ಪಂಚ್ ಲೈನ್ ಗಳ target readers ಯಾರು ಎಂಬುದು. ಬರೀ ಹುಡುಗರಷ್ಟೇ ಓದಬೇಕೆಂದು ಬರೆದಿಲ್ಲ.  ಇದನ್ನ ಯಾಕೆ ಹೇಳಬೇಕಾಯಿತೆಂದರೆ, ಬರುವ ಕಾಮೆಂಟ್ ಗಳಲ್ಲಿ ಕೇವಲ ಹುಡುಗರ ಸಂಖ್ಯೆಯೇ ಜಾಸ್ತಿ ಇರುತ್ತದೆ. (ನಾನು ಸ್ತ್ರೀ ದ್ವೇಷಿಯಲ್ಲ ಎಂಬುದನ್ನ ಸ್ಪಷ್ಟಪಡಿಸಲಿಚ್ಚಿಸುತ್ತೇನೆ.) ಆದರೆ, ಇದರಲ್ಲಿರುವ ಅರ್ಥಗಳು, ಒಳಾರ್ಥಗಳು ಈ ಪಂಚ್ ಲೈನರ್ ನ್ನೇ ಕೆಲವೊಮ್ಮೆ ತಬ್ಬಿಬ್ಬುಗೊಳಿಸುತ್ತವೆ. ಇನ್ನು ಸಾಮಾನ್ಯ ಓದುಗರಿಗೆ..???!! ಗೊತ್ತಿಲ್ಲ. ಇನ್ನೊಂದು ಸಂಗತಿಯೆಂದರೆ, ಇಲ್ಲಿರುವ ಹಲವಾರು ಪಂಚ್ ಲೈನ್ ಗಳು ಹುಡುಗಿಯರ ಕುರಿತಾಗಿವೆ. ತುಂಟಾಟದ ಕುರಿತಾಗಿವೆ. ಹುದುಗಿಯರಿಗೆ ತಮ್ಮನ್ನೇ ರೇಗಿಸಿದ್ದನ್ನ ಓದುವ ಆಸಕ್ತಿ ಇದೆಯಾ..? ಅದನ್ನ ಅವರೇ ಹೇಳ್ಬೇಕು.

ಹುಡುಗ – ಹುಡುಗಿಯರ ನಡುವಿನ chemistry ಯ strategy ಬಗ್ಗೆ ತಲೆಕೆಡಿಸುವ ಪಂಚ್ ಲೈನ್ ಗಳೂ ಇವೆ. ತಲೆಕೆಡಿಸಿಕೊಳ್ಳುವ ಹುಡುಗಿಯರಿದ್ದಾರಾ..? 🙂